ನೆಮ್ಮದಿಯ ಭಾವ

ನೆಮ್ಮದಿಯ ಭಾವ

When
Sun, 2 August 2026
Where
Price
Price TBA

ಶೀರ್ಷಿಕೆ: ಬಿ.ಬಿ. ಮಮದಾಪುರ ಬಾಲಕಿಯರ ಪ್ರೌಢಶಾಲೆಯಲ್ಲಿ ಭಾವಪೂರ್ಣ ಗುರುವಂದನಾ ಕಾರ್ಯಕ್ರಮ ಸುದ್ದಿ: ಕೆಎಲ್ಇ ಸಂಸ್ಥೆಯ ಅಂಗ ಸಂಸ್ಥೆಯಾದ ಸವದತ್ತಿಯ ಬಿ.ಬಿ ಮಮದಾಪುರ ಬಾಲಕಿಯರ ಪ್ರೌಢಶಾಲೆಯಲ್ಲಿ 2004 ಹಾಗೂ 2005ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಯ ವಿದ್ಯಾರ್ಥಿನಿಯರ ವತಿಯಿಂದ ಭಕ್ತಿ ಪೂರ್ವ ಗುರುವಂದನಾ ಕಾರ್ಯಕ್ರಮವು 8/2/2026 ರಂದು ಶಾಲಾ ಆವರಣದಲ್ಲಿ ಜರುಗಿತು. ಸುಮಾರು 20 ವರ್ಷಗಳ ನಂತರ ವಿವಿಧ ಕಡೆಗಳಲ್ಲಿ ವಿವಾಹವಾಗಿ ತಮ್ಮ ತಮ್ಮ ಬದುಕಿನಲ್ಲಿ ತೊಡಗಿದ್ದ ವಿದ್ಯಾರ್ಥಿನಿಯರು ಮತ್ತೆ ಒಂದೇ ವೇದಿಕೆಯಲ್ಲಿ ಸೇರುವುದು ಅಸಾಧ್ಯವೆನಿಸುವ ವಿಷಯ. ಆದರೂ ತಮಗೆ ಶಿಕ್ಷಣ ನೀಡಿದ ಶಾಲೆಗೆ ಮರಳಿ ಬಂದು ಗುರುಗಳಿಗೆ ವಂದನೆ ಸಲ್ಲಿಸಿದ ಈ ವಿದ್ಯಾರ್ಥಿನಿಯರ ನಡೆ ಶ್ಲಾಘನೀಯವಾಗಿದ್ದು, ಹೆಮ್ಮೆಯ ವಿಷಯವಾಗಿದೆ.ಹಾಗೂ ಗುರುಗಳು ವಿದ್ಯಾರ್ಥಿನಿಯರ ಭಾಂದವ್ಯ ಇನ್ನು ಬಿಗಿ ಯಾಗಿದೆ ಎಂದರೆ ಸುಳ್ಳಲ್ಲ. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿನಿಯರು “ಗುರುವಂದನೆ” ಎಂಬ ಪದಕ್ಕೆ ನಿಜವಾದ ಅರ್ಥ ನೀಡಿದರು. ಗುರು-ಶಿಷ್ಯ ಪರಂಪರೆಗೆ ಮೆರಗು ನೀಡುವಂತಹ ಅಪರೂಪದ ಕ್ಷಣಕ್ಕೆ ಹಳೆಯ ವಿದ್ಯಾರ್ಥಿನಿಯರು ಸಾಕ್ಷಿಯಾದರು.

Book on

More Other